Tuesday, August 14, 2012

ಮಹದನುಭವ ಭಾಗ ೫

ಶಂಕ್ರಣ್ಣ (ಶಂಕರಣ್ಣ) ವಿವರಿಸತೊಡಗಿದರು
"ಸಾರ್, ಕ್ಯಾಂಪ್ ಆನೆ ಅಂದ್ರೆ ಟ್ರೈನಿಂಗ್ ತೆಕ್ಕೊಳ್ತಿರೋ ಆನೆ.."
"ಟ್ರೈನಿಂಗಾ... ಆನೆಗೇನ್ರಿ ಟ್ರೈನಿಂಗು???"
"ಟ್ರೈನಿಂಗಂದ್ರೆ ಬುಧ್ದಿ ಕಲ್ಸೋದ್ ಸಾರ್."
"ಓಹ್ ಬುಧ್ಧಿ ಕಲೀತಿರೋ ಆನೇನಾ ಇದು??"
"ಹೂಂ ಮತ್ತೆ. ಹೆಂಗ್ ಕಲಿಸ್ತಾರೆ ಅಂತೀರಾ?".
"ಹೂಂ ಶಂಕ್ರಣ್ಣ ಹೇಳಿ."
"ಮೊದ್ಲು ಕಾಡಾನೇನ ಹಿಡೀತೌರೆ. ಹೆಂಗೆ ಅಂತೀರಾ?, ದೊಡ್ಡ ಹೊಂಡ ಮಾಡಿ ಅದ್ರ್ ಮ್ಯಾಗೆ ತೆಳ್ಕಿರೋ ಮರದ ತುಂಡನ್ನ ಹಾಕ್ತೌರೆ. ಆ ತುಂಡಿನ್ ಮ್ಯಾಲೆ ಹಲಸಿನ ಹಣ್ಣು ಕಬ್ಬು ಹಿಂಗೆ ಬ್ಯಾರೆ ಬ್ಯಾರೆ ಆನೆ ತಿನ್ನೋ ತಿನ್ಸನ್ನ ಹಾಕ್ತೌರೆ....

Tuesday, March 20, 2012

ಗೋಣಿಕೊಪ್ಪದಿಂದ ಕ್ಯಾಂಪ್ ತನಕ (ಮಹದನುಭವದ ನಾಲ್ಕನೇ ಕಂತು)


ಆತನಿಗೆ ಪ್ರಾಯ ಸುಮಾರು ೫೫+ ಇರಬಹುದು. ಹೊಟ್ಟೆ ಸರಿ ಸುಮಾರು ಅರ್ಧ ಅಡಿಯಷ್ಟು ಎದೆಯಿಂದ ಮುಂದಕ್ಕೆದ್ದಿತ್ತು! ತನ್ನ ಡೊಳ್ಳು ಹೊಟ್ಟೆಯನ್ನ ಹೊತ್ತುಕೊಂಡು ರಸ್ತೆಯ ಬದಿಯಲ್ಲಿರುವ ಗೂಡಂಗಡಿಯೊಳಗೆ ನಿಂತುಕೊಂಡೇ ಆಯಪ್ಪ ಸಂಚಾರೀವ್ಯವಸ್ಥೆಯನ್ನ ನಿಯಂತ್ರಿಸುತ್ತಿದ್ದ! (traffic duty ಇದ್ದಿರಬೇಕು) ಮಾತ್ರವಲ್ಲ ಸಮಯವನ್ನ ಸಾಗ ಹಾಕಲು ಧೂಮರಾಜನ ಶರಣು ಹೋಗಿದ್ದ. ಪೋಲೀಸ್ ಸಮವಸ್ತ್ರದಿಂದ ಆಕರ್ಷಿತನಾಗಿಯೋ ಏನೋ ಆತನ ಬಳಿ ತೆರಳಿ ಆತನಿಗೆ ಸಲಾಮು ಹೊಡೆದು,

Thursday, March 8, 2012

ಚಾಕಲೇತು(ಟು) ಮಾಮ ಇನ್ನು ಮನದೊಳಗಿನ ನೆನಪು :(

ನೆನಪಿನ ಕಂಬಳಿಯನ್ನ ಬಿಡಿಸಿದಶ್ಟೂ ಅದು ಬಿಡಿಸಿಕೊಳ್ಳುತ್ತಲೇ ಸಾಗುತ್ತದೆ. ಬಿಡಿಸಿ ಬಿಡಿಸಿ ಕೈಸೋತು ಸುಸ್ತಾದರೂ ನಿಲ್ಲಿಸಲು ಮನವೊಪ್ಪುವುದಿಲ್ಲ. ಕಾರಣ ಆ ನೆನಪಿನ ಕಂಬಳಿಯೊಳಗಣ ಕಸೂತಿ ಅತ್ಯಂತ ಸುಂದರ, ಮನಮೋಹಕ!
ಹೌದು ಆ ಕಸೂತಿಯ ನೂಲೆಳೆಗಳಲ್ಲಿ ಮುದ್ದು ಮಕ್ಕಳ ಕಿಲ ಕಿಲ ನಗುವಿದೆ, ಶಾಲೆ ಮೆಟ್ಟಿಲೇರಿದ ತುಂಟ ಮಕ್ಕಳ ತುಂಟಾತದ ದಿನಗಳಿವೆ, ಬಾಳ ಸಂಗಾತಿಗಾಗಿ ಊರಿಡೀ ಸುತ್ತಾಡಿ ಸುಸ್ತುಬಿದ್ದು ಕೊನೆಗೆ ಪಕ್ಕದೂರಲ್ಲೇ ಯಾರನ್ನೋ ಹುಡುಕಿ ತಂದ ತರುಣರ ಮನದ ಸಾರ್ಥಕ್ಯವಿದೆ, ಕೆಲಸದಿಂದ ನಿವೃತ್ತಿಯನ್ನ ಪಡೆದ ಬಳಿಕ ಬಿಡುವಿನ ವೇಳೆಯಲ್ಲೆಲ್ಲಾ  ಕುಳಿತು ಸಾವಿರಾರು ಮಾತುಗಳನ್ನ ಆಡಿದ ನಿವೃತ್ತ ಇಳಿ ಜವ್ವನರ ಆನಂದವಿದೆ, ಬಾಯ ಹಲ್ಲುಗಳುದುರಿ ಕೈ ಕಾಲುಗಳಲ್ಲಿ ಶಕ್ತಿ ಕುಂದಿದ ಹಣ್ಣು ಮುದುಕ/ಮುದುಕಿಯರ ಸಂತಸವಿದೆ, ಸಾಲದ ಶೂಲದಲ್ಲಿ ಸಿಲುಕಿ ತುತ್ತು ಅನ್ನಕ್ಕಾಗಿ ಹಪಹಪಿಸಿದ ಯಾವುದೋ ಬಡವನಿಗಿತ್ತ ಕರುಣೆಯಿದೆ, ಇನ್ನ್ಯಾರದ್ದೋ ಆನಂದ ಭಾಷ್ಪವಿದೆ, ಮತ್ಯಾರದ್ದೋ ಪ್ರಾರ್ಥನೆಯಿದೆ, ಮಾತ್ರವಲ್ಲ ಅಕ್ಕಪಕ್ಕದ ಎಲ್ಲಾ ದೇವರು ದಿಂಡರುಗಳ ಜಾತ್ರೆಗಳಿವೆ ಯುವಜನೋತ್ಸವಗಳಿವೆ, ಯಕ್ಷಗಾನಗಳಿವೆ, ನಾಟಕಗಳಿವೆ, ನಾಟ್ಯ ಸಂಗೀತಗಳ ಕಂಪಿದೆ. ಹೌದು ಆ ಕಂಬಳಿಗೆ ಕಸೂತಿಸರಕಾಗಿ ನಾಡಿಗೆ ನಾಡೇ ಇದೆ....
ಅಂತಹಾ ನೆನಪಕಂಬಳಿಯನ್ನ ಊರೊಳಗಿಟ್ಟು ಇಹಲೋಕವನ್ನ ತ್ಯಜಿಸಿದ ಶರ್ಮಣ್ಣ ಮಾಮನಿಗೊಂದು ಪ್ರಣಾಮ.

Thursday, February 23, 2012

ಸಿದ್ದಾಪುರದ ಗಜರಾಜ (ಹೀಗೊಂದು ಮಹದನುಭವ ಭಾಗ ೩)


ನನ್ನನ್ನ ಕಾಣುತ್ತಿದ್ದಂತೇ,
"ಹಾಯ್ ವಿಣಾಯಕಾ ಹೇಂಗಿಡ್ದೆ... ಬಾ ಇಳ್ಳಿ ಕೂರು, ಅಸರಿಂಗೆ ಎಂಟ ಅಕ್ಕು??"
ಎಂಬುದಾಗಿ ತುಂಬು ವೀಳ್ಯಕ (ವೀಳ್ಯ+ ಹವ್ಯಕ) ಭಾಷೆಯಲ್ಲಿ ಭಟ್ಟರ ಸ್ವಾಗತ, ಆಟಗಳನ್ನ (೧ದನೇ ಕಂತಿನಲ್ಲಿ ಉಲ್ಲೇಖಿಸಿದ) ಆಡಿ ಸುಸ್ತಾಗಿದ್ದ ನನಗೆ ಉಲ್ಲಾಸವನ್ನ ನೀಡಿದ್ದಂತೂ ನಿಜ...
ಮೊದಲೇ ತೀರ್ಮಾನಿಸಿದ್ದಂತೆ ಅಂದು ರಾತ್ರಿ ಅವರ ಮನೆಯಲ್ಲಿ ಮೊಕ್ಕಾಂ.
ಬದನೆ ಗೊಜ್ಜು, ಸಾರು, ಅನ್ನದೊಂದಿಗೆ ಕರುಂಕುರುಂ ಹಪ್ಪಳವನ್ನ (ಹಲಸಿನಹಣ್ಣಿನದ್ದು) ಮೂಗಿನ ವರೆಗೆ ತಿಂದು ತೇಗಿ ಕುಶಲೋಪರಿಯನ್ನ ಮಾತನಾಡ ಬೇಕಾದರೆ ಹೊರಗಿದ್ದ ನಾಯಿ ಅತಿಯಾಗಿ ಬೊಗಳ ತೊಡಗಿತು.